ಜೆದ್ದಾ: ತಾಂತ್ರಿಕ ಕಾಲೇಜುಗಳಿಂದ 65 ಶೇಖಡಾ ವಿದ್ಯಾರ್ಥಿಗಳು ಅನುತ್ತೀರ್ಣ |
ಪ್ರಕಟಿಸಿದ ದಿನಾಂಕ : 2008-07-29
ಒಟ್ಟು ಅರವತ್ತು ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣ : ಪಾಸಾದರೂ ಕಾಡುವ ನಿರುದ್ಯೋಗ ಭೀತಿ
ಜೆದ್ದಾ, ಜುಲೈ 29: ಸೌದಿ ಅರೇಬಿಯಾದ ವಿವಿಧ ತಾಂತ್ರಿಕ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಾಂಗ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಬಗ್ಗೆ ಒಲವು ಕುಂಠಿತವಾಗಿರುವುದು ಖಚಿತವಾಗಿ ಕಂಡುಬರುತ್ತಿದೆ. ಈ ವರ್ಷ ಸುಮಾರು ಅರವತ್ತು ಸಾವಿರ ವಿದ್ಯಾರ್ಥಿಗಳು (ಸುಮಾರು ೬೫%) ಅನುತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರು ನಿರುದ್ಯೋಗದ ಭೀತಿಯನ್ನು ಎದುರಿಸುತ್ತಿದ್ದಾರೆ.
ರಾಷ್ಟ್ರದಾದ್ಯಂತ ಸುಮಾರು ಐವತ್ತು ಶಿಕ್ಷಣ ಸಂಸ್ಥೆಗಳಿದ್ದು ಎಲ್ಲಾ ಸಂಸ್ಥೆಗಳ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿದೆ. ಪಾಸಾದ ವಿದ್ಯಾರ್ಥಿಗಳಿಗೆ ತಕ್ಕ ಉದ್ಯೋಗ ದೊರಕದಿರುವುದು ಹಾಗೂ ಚಿಕ್ಕಪುಟ್ಟ ಉದ್ಯೋಗಗಳನ್ನು ದೊರಕಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದುವರೆಗೆ ಉತ್ತೀರ್ಣರಾದವರಲ್ಲಿ ಶೇಖಡಾ ಐವತ್ತಕ್ಕೂ ಹೆಚ್ಚು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ತರಬೇತಿ ಸಂಸ್ಥೆಯ ತರಬೇತುದಾರ ಹಾಗೂ ಸಂಶೋಧಕರಾದ ಸಾಅದ್ ಅಲ್ ರಶೂದ್ ಅವರು ಸಲ್ಲಿಸಿದ ವರದಿಯಲ್ಲಿ ವಿಷದವಾಗಿ ಮಂಡಿಸಿದ್ದಾರೆ.
೨೦೦೩ ರಲ್ಲಿ ೩೩,೬೮೪ ವಿದ್ಯಾರ್ಥಿಗಳ ಸಂಖ್ಯೆ ೨೦೦೪ ರಲ್ಲಿ ೧೦,೮೦೨ ಕ್ಕೆ ಕುಸಿದಿದೆ. ಪದವಿ ಪಡೆದ ಬಳಿಕ ಕಾಡುವ ನಿರುದ್ಯೋಗ ಈ ಪ್ರಕ್ರಿಯೆಗೆ ಕಾರನವಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ವರದಿಯ ವಿವರಗಳು |
 |
ಕೃಪೆ : ಸೌದಿ ಗೆಜೆಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-29
|
|
|