ಆಭಾ: ಅಸೀರ್ ಪ್ರದೇಶದಲ್ಲಿ ಭಾರೀ ಮಳೆ |
ಪ್ರಕಟಿಸಿದ ದಿನಾಂಕ : 2008-07-28
ಖರ್ಜೂರ ಕೃಷಿಗೆ ಪೆಟ್ಟು : ಗುರುವಾರ ಶುಕ್ರವಾರಗಳಂದು ಸುರಿದ ಮಳೆ
ಆಭಾ, ಜುಲೈ 28: ಇಲ್ಲಿಗೆ ಸಮೀಪದ ಅಸೀರ್ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಗುರುವಾರ ಹಾಗೂ ಶುಕ್ರವಾರ ಭಾರಿ ಮಳೆಯಾಗಿದ್ದು ಖರ್ಜೂರ ಹಾಗೂ ಇತರ ಬೆಳೆಗಳಿಗೆ ಹಾನಿಯನ್ನುಂಟುಮಾಡಿದೆ. ಮಳೆಯ ಕಾರಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಜನಜೀವನ ಪ್ರಭಾವಗೊಂಡಿದೆ. ಮಳೆಯಿಂದಾಗಿ ಮರಳುಗಾಡಿನಲ್ಲಿ ಹಲವೆಡೆ ಕುಸಿಯುವ ಸಾಧ್ಯತೆಯಿದ್ದು ಜನರು ಅತೀವ ಎಚ್ಚರಿಕೆಯನ್ನು ವಹಿಸಬೇಕೆಂದು ನಾಗರಿಕ ಸುರಕ್ಷಾ ವಿಭಾಗದ ಅಧಿಕಾರಿ ಮೊಹಮ್ಮದ್ ಅಲ್ ಆಸ್ಸಿಮಿಯವರು ತಿಳಿಸಿದ್ದಾರೆ.
ಜುಲೈ ಆಗಸ್ಟ್ ತಿಂಗಳಲ್ಲಿ ಅತಿಹೆಚ್ಚಿನ ಸೆಖೆಯಿರುವುದು ಅರೇಬಿಯಾದ ಮರಳುಗಾಡಿನಲ್ಲಿ ಸಾಮಾನ್ಯವಾಗಿದ್ದು ಅನಿರೀಕ್ಷಿತ ಮಳೆ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ವರದಿಯ ವಿವರಗಳು |
 |
ಕೃಪೆ : ಸೌದಿ ಗೆಜೆಟ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-28
|
|
|