ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್: ನಕಲಿ ಪ್ರಮಾಣಪತ್ರ ನೀಡುತ್ತಿದ್ದ ತಂಡದ ಬಂಧನ

ಈಜಿಪ್ಟ್ ಹಾಗೂ ಭಾರತೀಯ  ನಾಗರಿಕರನ್ನೊಳಗೊಂಡ ವ್ಯವಸ್ಥಿತ ತಂಡ : ವೈದ್ಯಕೀಯ ನಿರ್ದೇಶನಾಲಯದ ಸೀಲುಗಳ ನಕಲು ವಶ

ಕುವೈಟ್, ಜುಲೈ 26:  ಕುವೈಟಿನಲ್ಲಿ ಉದ್ಯೋಗ ನೋಂದಾವಣೆಗೆ ಅಗತ್ಯವಾಗಿ ಬೇಕಾದ ಆರೋಗ್ಯ ಪ್ರಮಾಣಪತ್ರವನ್ನು ನಕಲಿಸಿ ಮಾರಾಟ ಮಾಡುತ್ತಿದ್ದ ಈಜಿಪ್ಟ್ ಮತ್ತು ಭಾರತೀಯ ಅನಿವಾಸಿಗಳಿಂದ ಕೂಡಿದ ತಂಡವೊಂದನ್ನು ಕುವೈಟ್ ಪೋಲೀಸರು ಬಂಧಿಸಿದ್ದಾರೆ.

ಈ ಮೊದಲು ಹಲವಾರು ಪ್ರಮಾಣಪತ್ರಗಳು ನಕಲಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಕಂಡುಹಿಡಿಯಲು ಪೋಲೀಸರಿಗೆ ದೂರು ಸಲ್ಲಿಸಲಾಗಿತ್ತು.

ಈ ಪ್ರಮಾಣಪತ್ರಗಳು ಉದ್ಯೋಗಾಕಾಂಕ್ಷಿಯನ್ನು ಏಯ್ಡ್ಸ್, ಟ್ಯೂಬರ್ ಕ್ಯುಲೋಸಿಸ್, ಹೆಪಾಟಿಟಿಸ್ ಮೊದಲಾದ ಖಾಯಿಲೆಗಳಿಂದ ಮುಕ್ತ ಎಂದು ಘೋಷಿಸುತ್ತಿದ್ದವು. ಇವುಗಳಲ್ಲಿ ಧೃಢೀಕರಣ ಸೀಲ್ ಸಹಾ ಯಥಾವತ್ತಾಗಿ ನಕಲು ಮಾಡಲಾಗಿದ್ದು ನಕಲು ಎಂದು ಕಂಡುಹಿಡಿಯುವುದು ಕಷ್ಟಸಾಧ್ಯವಾಗಿತ್ತು.

ಆದರೆ ಇಂತಹ ಪ್ರಮಾಣಪತ್ರವನ್ನು ಹೊಂದಿದ್ದ ಉದ್ಯೋಗಾಕಾಂಕ್ಷಿಯೊಬ್ಬನಿಗೆ ಪ್ರಮುಖ ಖಾಯಿಲೆಯಿರುವುದು ಆ ಬಳಿಕ ಕಂಡುಬಂದಿದ್ದು ಆತನನ್ನು ವಿಚಾರಣೆಗೊಳಪಡಿಸಿದ ಬಳಿಕ ಈ ಪ್ರಮಾಣಪತ್ರ ನಕಲಿ ಎಂದು ಕಂಡುಬಂದಿದೆ.

ಶೀಘ್ರದಲ್ಲಿ ಕಾರ್ಯಪ್ರವೃತ್ತರಾದ ಪೋಲೀಸರು ಆತನ ಸುಳಿವಿನ ಮೇರೆಗೆ ನಕಲಿ ಪ್ರಮಾಣಪತ್ರ ಒದಗಿಸುತ್ತಿದ್ದ ತಂಡವನ್ನು ಬಂಧಿಸಿದ್ದಾರೆ. ಈ ತಂಡ ಪ್ರತಿ ನಕಲಿ ಪ್ರಮಾಣಪತ್ರಕ್ಕೆ 350 ಕುವೈತಿ ದಿನಾರ್ ವೆಚ್ಚ ನಿಗದಿಪಡಿಸಿತ್ತು. (ಸುಮಾರು ನಲವತ್ತು ಸಾವಿರ ರೂಪಾಯಿ)

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುವೈಟ್ ಟೈಮ್ಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-26


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri