ದೋಹಾ: ಒಂದು ಮಿಲಿಯನ್ ಡಾಲರ್ ಗೆದ್ದ ಭಾರತೀಯ |
ಪ್ರಕಟಿಸಿದ ದಿನಾಂಕ : 2008-07-25
ದೋಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಾಫೆಲ್ ಡ್ರಾ ಭಾರತೀಯನ ಪಾಲಿಗೆ
ದೋಹಾ, ಜುಲೈ 25: ಕತರ್ ಏರ್ ವೇಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕತರ್ ಡ್ಯೂತಿ ಫ್ರೀ ರಾಫೆಲ್ ಡ್ರಾ ದಲ್ಲಿ ಭಾರತೀಯರಾದ ರೂಪೇಶ್ ಕುಮಾರ್ ಕಿಡುವುನಿಲ್ ಅವರಿಗೆ ಪ್ರಥಮ ಬಹುಮಾನವಾದ ಒಂದು ಮಿಲಿಯನ್ ಯು.ಎಸ್. ಡಾಲರುಗಳು ಲಭಿಸಿವೆ.
ತಮ್ಮ ನಾಲ್ಕು ತಿಂಗಳ ಮಗುವನ್ನು ನೋಡುವ ಸಂತೋಷದಲ್ಲಿ ಕುಟುಂಬವನ್ನು ಸೇರಲು ಊರಿಗೆ ಹೋಗಲು ಖರೀದಿಸಿದ ಟಿಕೇಟಿಗೆ ಬಹುಮಾನ ಬಂದಿದ್ದು ತನಗೆ ಅತಿ ಸಂತಸ ತಂದಿದೆ ಎಂದು ರೂಪೇಶ್ ತಿಳಿಸಿದ್ದಾರೆ. ಇದುವರೆಗೆ ಮೂರು ಡ್ರ್‍ಆಗಳು ನಡೆದಿದ್ದು ನಿನ್ನೆ ನಡೆದ ಮೂರನೆಯ ಡ್ರಾದಲ್ಲಿ ರೂಪೇಶ್ ಧಿಡೀರ್ ಶ್ರೀಮಂತರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಡೆಸಲಾಗುತ್ತಿರುವ ಈ ಡ್ರಾ ಪ್ರಯಾಣಿಕರು ಕತರ್ ಏರ್ ವೇಸ್ ಆಯ್ದುಕೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿ ಐದು ಸಾವಿರ ಟಿಕೆಟುಗಳಲ್ಲಿ ಒಂದಕ್ಕೆ ಮಿಲಿಯನ್ ಡಾಲರ್ ಬಹುಮಾನ ಖಚಿತವಿದ್ದು ಪ್ರತಿ ಟಿಕೇಟಿಗೆ 950 ಕತರಿ ರಿಯಾಲ್ ಬೆಲೆ ನಿಗದಿಪಡಿಸಲಾಗಿದೆ.
ಮಿಲಿಯನ್ ಡಾಲರ್ ಗೆದ್ದ ರೂಪೇಶ್ ಅವರಿಗೆ ಕತರ್ ಡ್ಯೂಟಿ ಫ್ರೀ ಸಂಸ್ಥೆಯ ಉಪಾಧ್ಯಕ್ಷೆ ಕೃಷ್ಣಕುಮಾರಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-25
|
|
|