ದೋಹಾ: ನಿರಾಶ್ರಿತ ಭಾರತೀಯರಿಗೆ ಸಹಾಯ ಒದಗಿಸಿದ ಭಾರತೀಯ ದೂತಾವಾಸ |
ಪ್ರಕಟಿಸಿದ ದಿನಾಂಕ : 2008-07-23
ಒಂಭತ್ತು ವರ್ಷಗಳಿಂದ ಮನೆ ನೋಡದ ಪಿ.ಅಬೂ : ಸಾಲ ತೀರಿಸಲು ಸಹಾಯ
ದೋಹಾ, ಜುಲೈ 23: ಭಾರತೀಯರಾದ ಪಿ.ಅಬೂ ಅವರು ಸುಮಾರು ಹತ್ತು ವರ್ಷಗಳಿಂದ ಸಾಲಬಾಧೆಯಲ್ಲಿ ಸಿಲುಕಿ ಸ್ವದೇಶಕ್ಕೆ ಹಿಂತಿರುಗಲು ಅಸಮರ್ಥರಾಗಿದ್ದರು. ಸಾಲ ತೀರಿಸದೇ ಸ್ವದೇಶಕ್ಕೆ ಹಿಂತಿರುಗುವಂತಿಲ್ಲ ಎಂಬ ನ್ಯಾಯಾಲಯದ ತೀರ್ಪಿಗೆ ಬದ್ದರಾಗಿ ಕಳೆದ ಒಂಭತ್ತು ವರ್ಷಗಳಿಂದ ಸ್ವದೇಶಕ್ಕೆ ಹಿಂದಿರುಗಲು ಅಸಾಧ್ಯವಾಗಿತ್ತು.
ಇವರ ನೆರವಿಗೆ ಬಂದ ಭಾರತೀಯ ದೂತಾವಾಸ ಅವರ ಸಾಲದ ಹೊರೆಯನ್ನು ಕಡಿಮೆ ಮಾಡಿ ಸ್ವದೇಶಕ್ಕೆ ಹಿಂತಿರುಗಲು ತನ್ನ ಸಹಾಯಹಸ್ತ ಚಾಚಿದೆ. ೨೦೦೧ರಲ್ಲಿ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದ ಅಬೂ ಅವರಿಗೆ ರೆಸ್ಟೋರೆಂಟ್ ಮುಚ್ಚಲು ಆದೇಶ ನೀಡಿದ ಬಳಿಕ ಹಾಕಿದ್ದ ಬಂಡವಾಳವೂ ಹಿಂತಿರುಗಿ ಬರದೇ ಸಾಲ ಮಾಡುವುದು ಅನಿವಾರ್ಯವಾಗಿತ್ತು. ನೆರವು ನೀಡುವ ವೇಳೆಯಲ್ಲಿ ಭಾರತೀಯ ದೂತಾವಾಸದ ಅಧಿಕಾರಿಗಳಾದ ಸಂಜೀವ್ ಕೊಹ್ಲೆ, ಉಪಕಾರ್ಯದರ್ಶಿ ಟಿ.ಆರ್. ಮೀನಾ, ಏರಿಯಾ ಮ್ಯಾನೇಜರ್ ನಾಸರ್ ಅಲ್ ಹಜ್ರಿ ಹಾಗೂ ಅಶೋಕ್ ಪಿಳ್ಳೈ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-23
|
|
|