ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಆಸ್ಟ್ರೇಲಿಯಾದ ಸಿಡ್ನಿ ಕನ್ನಡ ಸಂಘಕ್ಕೀಗ 25 ವರ್ಷ..

ಆಸ್ಟ್ರೇಲಿಯಾದ ಸಿಡ್ನಿ ಎಂದರೆ ಕೆಲವರಿಗೆ ಕ್ರಿಕೆಟ್ ಮ್ಯಾಚ್ ನೆನಪಾಗುತ್ತದೆ. ಇನ್ನು ಕೆಲವರಿಗೆ ಒಪೆರಾ ಹೌಸ್ ಅಥವಾ ಡಾರ್ಲಿಂಗ್ ಹಾರ್ಬರ್. ಮಾಸ್ಟರ್ ಹಿರಣ್ಣಯ್ಯ, ಮಿಮಿಕ್ರಿ ದಯಾನಂದ್, ಬಿ.ಆರ್.ಛಾಯಾ ಮುಂತಾದ ಕಲಾವಿದರಿಗೆ ಕನ್ನಡ ನೆನಪಾಗುತ್ತದೆ!

ಕನ್ನಡವೆಂಬ ಭಾಷೆಯೊಂದಿದೆ ಎಂಬುದೇ ಗೊತ್ತಿಲ್ಲದ ಜನರಿರುವ ಸಿಡ್ನಿಯ ಮಣ್ಣಿಗೆ ಕನ್ನಡದ ವಾಸನೆ ಬಂದಿದ್ದು ಹೇಗೆ ಎಂದಿರಾ? ಅದು ಅಲ್ಲಿನ ಕನ್ನಡ ಸಂಘದ ಕೊಡುಗೆ. ಮೇಲೆ ಹೇಳಿದ ಕಲಾವಿದರೆಲ್ಲ ಅಲ್ಲಿಗೆ ಹೋಗಿ ಕಾರ್ಯಕ್ರಮ ಕೊಟ್ಟು ಬಂದವರು. ಆ ಸಂಘಕ್ಕೀಗ 25 .

ಕರ್ನಾಟಕದಲ್ಲಿ ಕನ್ನಡದ ಹೆಸರಿನ ಸಂಘಟನೆ ಐವತ್ತು ವರ್ಷ ಪೂರೈಸುವುದು ಅಚ್ಚರಿಯೇನಲ್ಲ. ಆದರೆ, ದೂರದ ಸಿಡ್ನಿಯಲ್ಲಿ, ಕನ್ನಡ ಮಾತಾಡುವುದು ಅನಿವಾರ್ಯ ಅಲ್ಲ ಎಂಬ ಜಾಗದಲ್ಲೂ ಕನ್ನಡ ಸಂಘವೊಂದು 25 ವರ್ಷವನ್ನು ಕ್ರಿಯಾಶೀಲವಾಗಿ ಪೂರೈಸುತ್ತದೆ ಅಂದರೆ ಅದು ವಿಶೇಷ.

ಅಮೆರಿಕ, ಬ್ರಿಟನ್ನಿನಲ್ಲಾದರೆ ರಸ್ತೆ ರಸ್ತೆಗೆ ಕನ್ನಡಿಗರು ಸಿಗುತ್ತಾರೆ. ಅವರನ್ನು ಸೇರಿಸಿ ಕೊಂಡು ಸಂಘ ಸಂಸ್ಥೆ ಕಟ್ಟುವುದು ಸುಲಭ. ಆದರೆ ಸಿಡ್ನಿಯಲ್ಲಿ ಹಾಗಲ್ಲ. ಅಲ್ಲಿರುವ ಕನ್ನಡಿಗರ ಸಂಖ್ಯೆ 4000 ಮಾತ್ರ. ಅವರಲ್ಲೇ ಆಸಕ್ತಿ ಇರುವವರನ್ನು ಕೂಡಿಸಿಕೊಂಡು ಸಂಘಕ್ಕೆ ಜೀವ ತುಂಬಿ, ಕೊನೇ ಪಕ್ಷ ನಮ್ಮ ಭಾಷೆ- ಸಂಸ್ಕೃತಿ ಮರೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದವರು ಡಾ|ಸಿದ್ಧಲಿಂಗೇಶ್ವರ ಒರೆಕೊಂಡಿ. ಅವರೇ ಈ ಸಂಘ ಕಟ್ಟಿದವರು.

ಆಗ ಇದು ಡಾಕ್ಟರ ಸಂಘ
1983 ರಲ್ಲಿ ಒರೆಕೊಂಡಿಯವರು ಇಲ್ಲೊಂದು ಕನ್ನಡ ಸಂಘ ಕಟ್ಟಬೇಕು ಎಂದು ಯೋಚಿಸಿದಾಗ ಸಿಡ್ನಿಯಲ್ಲಿ ಇದ್ದ ಕನ್ನಡಿಗರು 40 ಮಂದಿ ಮಾತ್ರ. ಅವರೆಲ್ಲರೂ ಡಾಕ್ಟರುಗಳು. ಅವರಿಂದಲೇ ಶುರುವಾದ ಸಂಘ ಕ್ರಮೇಣ ಎಂಜಿನಿಯರುಗಳು, ತಂತ್ರಜ್ಞರು ಹೀಗೆ ಸಿಡ್ನಿಗೆ ಬಂದ ಕನ್ನಡಿಗರನ್ನೆಲ್ಲ ಸೇರಿಸಿಕೊಂಡು ಬೆಳೆಯುತ್ತ ಇಂದು ಸುಮಾರು ೪೦೦೦ ಸದಸ್ಯರನ್ನು ಹೊಂದಿದೆ.

ಕನ್ನಡ ರೇಡಿಯೋ!
ಬೆಂಗಳೂರಿನಲ್ಲಿರುವ ಎಫ್ಫೆಮ್ ಚಾನಲ್ಲುಗಳಲ್ಲೇ ಕನ್ನಡವನ್ನು ಹುಡುಕಿ ತೆಗೆಯಬೇಕಾದ ಸಂದರ್ಭ ಬಂದಿರುವಾಗ ಸಿಡ್ನಿ ಕನ್ನಡಿಗರು ವಾರಕ್ಕೊಂದು ದಿನ ಅಚ್ಚ ಕನ್ನಡದ ಕಾರ್ಯಕ್ರಮ ಕೇಳುತ್ತಾರೆ ಎಂದರೆ ಕರ್ನಾಟಕದ ಕನ್ನಡಿಗರಲ್ಲಿ ಅಸೂಯೆ ಹುಟ್ಟಬೇಕು!

ಸಿಡ್ನಿಯ ಎಸ್‌ಬಿ‌ಎಸ್ ರೇಡಿಯೋದಲ್ಲಿ ಪ್ರತಿ ಭಾನುವಾರ 5 ರಿಂದ 6 ಗಂಟೆಯ ಪ್ರೈಮ್ ಟೈಮ್‌ನಲ್ಲಿ ಕನ್ನಡ ಕಾರ್ಯಕ್ರಮ ಪ್ರಸಾರ ಮಾಡುವ ವ್ಯವಸ್ಥೆಯನ್ನು ಸಂಘ ಮಾಡಿಕೊಂಡಿದೆ. ಅದರ ಮೂಲಕ ಕರ್ನಾಟಕದ ಹಾಗೂ ಭಾರತದ ಸುದ್ದಿ, ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ವಿಚಾರಗಳು, ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳನ್ನು ಕೇಳುವ ಅವಕಾಶ ಕನ್ನಡಿಗರಿಗೆ.

ಆಸ್ಟ್ರೇಲಿಯಾದಲ್ಲೂ ಚಂದನ ಟಿವಿ!
ಆಸ್ಟ್ರೇಲಿಯಾದಲ್ಲೂ ‘ಚಂದನ’ ಕನ್ನಡ ವಾಹಿನಿ ಪ್ರವಹಿಸುತ್ತಿದೆ. ಇದು ನಮ್ಮ ದೂರದರ್ಶನದ ಚಂದನವಲ್ಲ!!.

ರೇಡಿಯೋದ ಹಾಗೆಯೇ ಕನ್ನಡ ಸಂಘ ಅಲ್ಲಿ ಪ್ರಾರಂಭಿಸಿರುವ ಕನ್ನಡ ಟಿವಿ ವಾಹಿನಿಗೆ ಇಟ್ಟ ಹೆಸರಿದು. ಇದರಲ್ಲಿ ಕನ್ನಡ ಗಂಧದ ಬಗೆಬಗೆಯ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗಿ ಅಲ್ಲಿನ ಕನ್ನಡ ಮನಸ್ಸುಗಳನ್ನು ತಣಿಸುತ್ತದೆ.

ಲಿವರ್‌ಪೂಲ್ ಮತ್ತು ಸ್ಟ್ರಾತ್‌ಫೀಲ್ಡ್ ಗ್ರಂಥಾಲಯಕ್ಕೆ ಕನ್ನಡ ಸಂಘ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ದೇಣಿಗೆ ಕೊಟ್ಟಿದೆ. ಇದರಿಂದಾಗಿ ಸಿಡ್ನಿ ಮತ್ತು ನ್ಯೂ ಸೌತ್ ವೇಲ್ಸ್‌ನ ಯಾವುದೇ ಗ್ರಂಥಾಲಯದಲ್ಲೂ ಕನ್ನಡಿಗರು ಬಯಸಿದರೆ ಕನ್ನಡದ ಪುಸ್ತಕ ತರಿಸಿ ಓದಬಹುದು.

ವಿದೇಶಗಳಲ್ಲಿರುವ ಕನ್ನಡಿಗರು ಅನುಭವಿಸುವ ಸಾಮಾನ್ಯ ಕಷ್ಟವೆಂದರೆ ಇ-ಮೇಲ್ ಓದುವಂತೆ ಕಷ್ಟಪಟ್ಟು ಇ-ಪುಸ್ತಕ ಓದುವುದು. ಈ ಕಾಟಾಚಾರದ ಕೆಲಸದಿಂದ ಆಸ್ಟ್ರೇಲಿಯಾದ ಕನ್ನಡಿಗರು ಮುಕ್ತರು.

ಕಾಂಗರೂ ನಾಡಲ್ಲಿ ಕನ್ನಡ ಶಾಲೆ
ಆಸ್ಟ್ರೇಲಿಯಾದಲ್ಲಿ ಹುಟ್ಟುವ ಕನ್ನಡದ ಮಕ್ಕಳಿಗೆ ಮಾತೃಭಾಷೆಯಲ್ಲೂ ಶಿಕ್ಷಣ ಕೊಡುವ ವ್ಯವಸ್ಥೆಯನ್ನು ಸಂಘ ಮಾಡಿಕೊಂಡಿದೆ. ಅದಕ್ಕಾಗಿ ಲಿವರ್‌ಪೂಲ್ ಮತ್ತು ಬ್ಲಾಕ್ ಟೌನ್‌ನಲ್ಲಿ ಕನ್ನಡ ಶಾಲೆಯನ್ನೇ ಆರಂಭಿಸಿದೆ. ಮಕ್ಕಳು ಬಿಡುವಿನ ಸಮಯದಲ್ಲಿ ಅಲ್ಲಿ ತಮ್ಮ ಭಾಷೆ, ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುತ್ತಾರೆ.

ಪ್ರತಿವರ್ಷ ಕರ್ನಾಟಕದಿಂದ ಪ್ರಸಿದ್ಧ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸುವುದು ಮೊದಲಿನಿಂದ ನಡೆದುಕೊಂಡು ಬಂದ ಅಭ್ಯಾಸ. 2004 ರಲ್ಲಿ ಕರ್ನಾಟಕದ ಜೊತೆ ಜೊತೆಗೇ ಕುವೆಂಪು ಜನ್ಮ ಶತಮಾನೋತ್ಸವ ನಡೆಸಿದ್ದು ವಿಶೇಷ. 2003 ರಲ್ಲಿ ನಮ್ಮ ಸಂಘಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಸಿಕ್ಕಿದೆ ಎನ್ನುತ್ತಾರೆ ಸಂಘದ ಸಂಸ್ಥಾಪಕ ಅಧ್ಯಕ್ಷ ಸಿದ್ಧಲಿಂಗೇಶ್ವರ ಒರೆಕೊಂಡಿ.

26 ರಂದು ಬೆಳ್ಳಿಹಬ್ಬ
ಇಷ್ಟು ವರ್ಷ ಕನ್ನಡದ ಚಟುವಟಿಕೆಯಲ್ಲಿ ತೊಡಗಿದ್ದ ಸಂಘ ಇದೀಗ ಜುಲೈ 26 ರಂದು ನಡೆಯುವ ಬೆಳ್ಳಿಹಬ್ಬದ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಸಿಡ್ನಿಯ ಬ್ಲಾಕ್ ಟೌನ್‌ನಲ್ಲಿರುವ ಬೌಮನ್ ಹಾಲ್‌ನಲ್ಲಿ ಅಂದು ವೈಭವಪೂರ್ಣ ಸಮಾರಂಭ. ಕರ್ನಾಟಕದಿಂದ ಹಾಸ್ಯ ಕಲಾವಿದ ಪ್ರಾಣೇಶ್, ಗಾಯಕಿ ಎಂ.ಡಿ.ಪಲ್ಲವಿ ಅಲ್ಲಿರುತ್ತಾರೆ. ಸ್ಥಳೀಯ ಕಲಾವಿದರಿಂದ ಸಂಗೀತ, ನೃತ್ಯ, ನಾಟಕ ಮುಂತಾದ ಕಾರ್ಯಕ್ರಮವಿದೆ.

ಈಗಾಗಲೇ ಬೆಳ್ಳಿಹಬ್ಬದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ನೇಮಿಸಲಾಗಿದೆ. ಇದು ಸಿಡ್ನಿ ಕನ್ನಡಿಗರು ಮರೆಯಲಾಗದ ದಿನವಾಗಬೇಕು ಎಂಬ ಇಚ್ಛೆಯಿಂದ ಅವೆಲ್ಲ ಉತ್ಸಾಹದಲ್ಲಿ ಕೆಲಸ ಮಾಡುತ್ತಿವೆ ಎನ್ನುತ್ತಾರೆ ಸಂಘದ ಉಪಾಧ್ಯಕ್ಷೆ ಗೀತಾ ಗೋಪಿನಾಥ್.

ಅಮೆರಿಕದಲ್ಲಿ ಅಕ್ಕ ಸಂಘಟನೆ ವಿಶ್ವ ಕನ್ನಡ ಸಮ್ಮೇಳನ ನಡೆಸಿದಂತೆ ಸಿಡ್ನಿಯಲ್ಲೂ ಅಂತಹುದೇ ಬೃಹತ್ ಸಮಾರಂಭ ನಡೆಸುವ ಉದ್ದೇಶವಿದೆ ಎನ್ನುವ ಮೂಲಕ ಸಂಘದ ಅಧ್ಯಕ್ಷೆ ಡಾ|ನಾಗಮ್ಮ ಪ್ರಕಾಶ್ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ.

ಸಂಘದ ಹೆಗ್ಗಳಿಕೆ
~ 1974 ರಲ್ಲಿ ಎಸ್‌ಬಿ‌ಎಸ್ ರೇಡಿಯೋದಲ್ಲಿ ಮೊಟ್ಟಮೊದಲ ಕನ್ನಡ ಕಾರ್ಯಕ್ರಮ. ಅದು ಇಂದಿಗೂ ಪ್ರತಿವಾರ ಪ್ರಸಾರವಾಗುತ್ತಿದೆ.

~ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲು ಲಿವರ್‌ಪೂಲ್ ಮತ್ತು ಬ್ಲಾಕ್ ಟೌನ್‌ನಲ್ಲಿ ಕನ್ನಡ ಶಾಲೆ. ಕನಕಾಪುರ ನಾರಾಯಣ, ವಿಜಯಕುಮಾರ ಹಲಗಲಿ ಶಿಕ್ಷಕರು.
~ ಪ್ರತಿವರ್ಷ 2-3 ಸಾಂಸ್ಕೃತಿಕ ಕಾರ್ಯಕ್ರಮ. ಕರ್ನಾಟಕದಿಂದ ಬಂದು ಕಾರ್ಯಕ್ರಮ ನಡೆಸಿಕೊಟ್ಟ ಪ್ರಸಿದ್ಧ ಕಲಾವಿದರು ಎಂ.ಎಲ್.ವಸಂತ ಕುಮಾರಿ, ಮಾಸ್ಟರ್ ಹಿರಣ್ಣಯ್ಯ, ರಾಜು ಅನಂತಸ್ವಾಮಿ, ಮಿಮಿಕ್ರಿ ದಯಾನಂದ, ಬಿ.ಆರ್.ಛಾಯಾ, ಸುಧಾ ಬರಗೂರು, ಮಂಜುಳಾ ಗುರುರಾಜ್, ಪ್ರೊ|ಕೃಷ್ಣೇಗೌಡ.

~ 2006 ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವ. ಡಾ|ಎಂ.ಎಂ. ಕಲಬುರ್ಗಿ ಅಧ್ಯಕ್ಷತೆಯಲ್ಲಿ ಕವಿ ಸಮ್ಮೇಳನ.
~ 2006 ರಲ್ಲಿ ಸಂಘದ ಯುವ ಘಟಕ ಸ್ಥಾಪನೆ. ಆಗ ಜೋಕುಮಾರಸ್ವಾಮಿ ನಾಟಕ ಪ್ರದರ್ಶನ.
~ 2007 ರಲ್ಲಿ ಮಕ್ಕಳ ದಿನಾಚರಣೆ. ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಹಾಗೂ ಅದರಲ್ಲಿ ಭಾಗವಹಿಸಿದ್ದು ಮಕ್ಕಳೇ.
~ ಸಂಘದ ಕ್ರಿಯಾಶೀಲತೆಗೆ ಬಹುಮಾನವಾಗಿ 2003 ರಲ್ಲಿ ಸಂಘಕ್ಕೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.
~ ಸಿಡ್ನಿಯಲ್ಲಿ ಸಂಘದ ವಿವಿಧ ಘಟಕಗಳ ವತಿಯಿಂದ ಇಂಡಿಯನ್ ಫೇರ್.
ಈಗ ರಜತ ಮಹೋತ್ಸವಕ್ಕೆ ಸಿದ್ಧತೆ. ಜುಲೈ ೨೬ರಂದು ಅದ್ಧೂರಿ ಸಮಾರಂಭ.

ಇಷ್ಟು ವರ್ಷ ಕನ್ನಡದ ಚಟುವಟಿಕೆಯಲ್ಲಿ
ತೊಡಗಿದ್ದ ಸಂಘ ಇದೀಗ ಜುಲೈ 26 ರಂದು ನಡೆಯುವ ಬೆಳ್ಳಿಹಬ್ಬದ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಸಿಡ್ನಿಯ ಬ್ಲಾಕ್ ಟೌನ್‌ನಲ್ಲಿರುವ ಬೌಮನ್ ಹಾಲ್‌ನಲ್ಲಿ ಅಂದು ವೈಭವಪೂರ್ಣ ಸಮಾರಂಭ. ಕರ್ನಾಟಕದಿಂದ ಹಾಸ್ಯ ಕಲಾವಿದ ಪ್ರಾಣೇಶ್, ಗಾಯಕಿ ಎಂ.ಡಿ.ಪಲ್ಲವಿ ಅಲ್ಲಿರುತ್ತಾರೆ.

ಕನ್ನಡ ಸಂಘದ ಬಗೆಗೆ ಮಾಹಿತಿ ಬೇಕಾದರೆ: www.kannada.org.au

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಎಂ.ಕೋದಂಡರಾಮ ಕುಡ್ವ, ಆಸ್ಟ್ರೇಲಿಯ| ಕನ್ನಡ ಪ್ರಭ
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-07-20


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅಮೆರಿಕದಲ್ಲಿ ಭಾರತ ಸ್ವಾತಂತ್ರ್ಯ ಪೆರೇಡ್‌ಗೆ ದೀಪಿಕಾ ಪಡುಕೋಣೆ
»ಜರ್ಮನಿಯ ವಿದ್ವಾಂಸರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ
»ನ್ಯೂಜೆರ್ಸಿಯಲ್ಲಿ ‘ರಾಜ್‌ಕುಮಾರ್ ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್’ ಕೃತಿ ಬಿಡುಗಡೆ
»2500 ಕೋಟಿ ವಂಚಿಸಿದ 3ಎನ್‌ಆರ್‌ಐಗಳಿಗೆ ಜೈಲು
»ಸೂರ್ಯ ಮುಳುಗದ ನಾಡಿನಲ್ಲಿ ಜೂನ್‌ನಲ್ಲಿ ಕನ್ನಡ ಕಲರವ
»ಚಿಕಾಗೋ: ಮಂಗಳೂರು ಕೊಂಕಣ್ಸ್ ಆಯೋಜಿಸಿರುವ ಕೊಂಕಣ್ ಫೆಸ್ಟ್-2008
»ಸ್ಕಾಟ್ಲೆಂಡ್‌ನಲ್ಲಿ ಅಪಘಾತ: ಕರ್ನಾಟಕ ಮಹಿಳೆ ಸಾವು
»ಆಕ್ಲೆಂಡಿನಲ್ಲಿ ಸಂಗೀತೋಲ್ಲಾಸದ ಹೂಮಳೆ
»ಉದಯರವಿಯ ನಾಡಿನಲ್ಲಿ ಕನ್ನಡ ಕಲರವ
»ಚಿಕಾಗೋದಲ್ಲಿ ಡಾ. ಆಸ್ಟಿನ್ ಪ್ರಭು ರವರಿಗೆ ೫-ಡೈಮಂಡ್ ಎಂ.ಜೆ.ಎಫ್. (ಮೆಲ್ವಿನ್ ಜೋನ್ಸ್ ಫೆಲೋ) ಪ್ರಶಸ್ತಿ
»ಉಪಾಧ್ಯಕ್ಷ ಹುದ್ದೆಗೆ ಬಾಬ್ಬಿ ಜಿಂದಲ್ ಸ್ಪರ್ಧೆ?
»ನಯಾಗರ ಫಾಲ್ಸ್ಗ್ ಗೆ ತೆರಳುವಾಗ ಅಪಘಾತ - 6 ಭಾರತಿಯರ ಮರಣ
»ಅಂಧ್ರ ವಿದ್ಯಾರ್ಥಿನಿ ಕೊಲೆ ಪ್ರಕರಣ: ಭಾರತೀಯನ ವಿಚಾರಣೆ
»ಹಿಲರಿ ಕ್ಲಿಂಟನ್‌ಗೆ ಬೆಳಗಾವಿಯ ಫಂಡ್‌ರೈಸರ್!: ಕನ್ನಡಿಗನ ಸಾಧನೆ
»ಇಬ್ಬರು ಅಪ್ರಾಪ್ತ ಮಕ್ಕಳ ಶವ ಕಾರಿನಲ್ಲಿ ಪತ್ತೆ
»ಶಿಕಾಗೊ 'ಅಕ್ಕ' ವಿಶ್ವಕನ್ನಡ ಸಮ್ಮೇಳನದ ವಿಶೇಷಗಳು
»ಲಂಡನ್ ಬ್ಯಾಂಕ್‌ಗೆ 564 ಕೋಟಿ ವಂಚಿಸಿದ ಭಾರತೀಯನ ಬಂಧನ
»ಉಪಾಧ್ಯಕ್ಷ ಪಟ್ಟ ಬೇಡ: ಜಿಂದಾಲ್
»ಲಕ್ಷ್ಮಿ ಮಿತ್ತಲ್‌ಗೆ ಸತತ ನಾಲ್ಕನೇ ವರ್ಷ ಬ್ರಿಟನ್ ಶ್ರೀಮಂತ ಉದ್ಯಮಿ ಪಟ್ಟ
»ಇಂಗ್ಲೆಂಡಿನಲ್ಲೊಂದು ಯುಗಾದಿ ಆಚರಣೆ
»ಆಕ್ಲೆಂಡ್ ಕನ್ನಡ ಕೂಟದಲ್ಲಿ ಸಂಭ್ರಮದ ಯುಗಾದಿ
»ಸ್ವತಃ ಜ್ಯೋತಿ ಓಟ ಆಯೋಜಿಸಿದ ಟಿಬೆಟಿಯನ್ನರು
»ಅಮೆರಿಕದಲ್ಲಿದ್ದ ಎಂಜಿನಿಯರ್ ಚುನಾವಣೆ ಕಣಕ್ಕೆ
»ರೋಬಿನ್ ಹುಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ `ಯಕ್ಷಗಾನ'
»ನ್ಯೂಜಿಲೆಂಡ್‌ನಲ್ಲೂ ಬಸವಣ್ಣನ ಪ್ರಭಾವ: ಸಚಿವ ಕ್ರಿಸ್ ಕಾರ್ಟರ್
»ಮೀರಾ ನಾಯರ್‌ಗೆ `ವರ್ಷದ ವ್ಯಕ್ತಿ' ಪ್ರಶಸ್ತಿ
»ಇಂದ್ರಾ ನೂಯಿ ವೇತನ 14.74 ದಶಲಕ್ಷ ಡಾಲರ್
»ಕಂಬನಿ: ರೋಸ್ ಡಿ’ಸೋಜ ನಮ್ಮನ್ನಗಲಿದರು
»ಲಂಡನ್ ನಗರದಲ್ಲಿ ಒಂಟಿ ಬಾಲಕ ಯಾರೀತ?
»ಎನ್.ಆರ್.ಐ ಗಳು ವರ್ಷಕ್ಕೆ 27 ಬಿಲಿಯನ್ ಡಾಲರನ್ನು ಮಾತ್ರಭೂಮಿಗೆ ಕಳಿಸುತ್ತಾರೆ
»ಇಂದ್ರಾ ನೂಯಿ ಆದರ್ಶ ಮಹಿಳೆ
»ಅಮೇರಿಕಾ: ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದ ಭಾರತೀಯ ವಿದ್ಯಾರ್ಥಿನಿ
»ಭಾರತ ಮೂಲದ 'ಡಾ.ಡೆತ್' ಅಮೆರಿಕದಲ್ಲಿ ಬಂಧನ
»ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಯ ಹತ್ಯೆ
»ಮುಂಬೈ ಬೆಡಗಿ ಶಗುನ್ ಭಾರತೀಯ ಭುವನಸುಂದರಿ
»ಯುನಿವರ್ಸಿಟಿಯಲ್ಲಿ ಮಾರಕ ಕೊಲೆ!
»ಕೆನಡಾದ ೪ನೇ ದೊಡ್ಡ ಭಾಷೆ ಪಂಜಾಬಿ
»ಬಾಬಿ ಜಿಂದಾಲ್ ಅಮೆರಿಕ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿ?
»ಸಿಲಿಕಾನ್ ವ್ಯಾಲಿಯಲ್ಲಿ ಜೋಕುಮಾರನ ಮೋಡಿ
»`ಜೂನಿಯರ್ ನೊಬೆಲ್' ಫೈನಲ್‌ಗೆ ೭ ಭಾರತೀಯ ಮೂಲದ ವಿದ್ಯಾರ್ಥಿಗಳು
»ಮಲ್ಲಿಗೆ ಚಪ್ಪರದ ಕೆಳಗೆ ಸಂಕ್ರಾಂತಿ ಹಾಡು
»ಹಲವು ರಾಷ್ಟ್ರಗಳ್ಲಲಿ ಗಣರಾಜ್ಯೋತ್ಸವ ಆಚರಣೆ
»ಭಾರತೀಯ ಉದ್ಯಮಿ ರಾಬರ್ಟ್ ಸಾವು
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri