ಮಂ-ಬೆಂ ರೈಲು ಕಾರವಾರಕ್ಕೆ ಓಡೀತೇ? |
ಪ್ರಕಟಿಸಿದ ದಿನಾಂಕ : 2009-08-30
ಮಂಗಳೂರು-ಬೆಂಗಳೂರು ಮಧ್ಯೆ ಹಗಲು ರೈಲು ಶನಿವಾರ ವಿದ್ಯುಕ್ತವಾಗಿ ಚಾಲನೆ ಗೊಂಡಿದೆ. ಈ ರೈಲು ಸೇವೆಯನ್ನು ಕಾರವಾರದವರೆಗೆ ವಿಸ್ತರಿಸ ಬೇಕು ಎನ್ನುವ ಬೇಡಿಕೆ ಮಾತ್ರ ಕೊನೆಗೂ ಈಡೇರಲಿಲ್ಲ. ಮುಂದಿನ ದಿನಗಳಲ್ಲಾದರೂ ಮಂ- ಬೆಂ ರೈಲು ಕಾರ ವಾರದವರೆಗೆ ಓಡೀತೇ?
ಕಾರವಾರ: ಬೆಂಗಳೂರು- ಮಂಗಳೂರು ಹಗಲು ರೈಲು ಪ್ರಾರಂಭಿಸಿ ಅದರ ಸೇವೆಯ ನ್ನು ಕಾರವಾರದವರೆಗೂ ವಿಸ್ತರಿಸಬೇಕು ಎಂದು ಕರಾವಳಿ ಜಿಲ್ಲೆಗಳ ಸಂಸದರ ನಿಯೋ ಗ ಜುಲೈನಲ್ಲೇ ರೈಲ್ವೆ ಖಾತೆ ರಾಜ್ಯ ಸಚಿವ ಕೆ. ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಆದರೆ ಅದರ ಫಲ ಮಾತ್ರ ಉತ್ತರ ಕನ್ನಡ ಜಿಲ್ಲೆಗೆ ಸಿಕ್ಕಿಲ್ಲ.
ರಾತ್ರಿ ಸಂಚರಿಸುವ ಬೆಂಗಳೂರು-ಮಂಗಳೂರು ರೈಲನ್ನು ಉಡುಪಿ-ಕುಂದಾಪುರ ಮಾರ್ಗವಾಗಿ ಕಾರವಾರದವರೆಗೆ ವಿಸ್ತರಣೆ ಮಾಡಬೇಕೆಂದು ವಿನಂತಿಸಲಾಗಿತ್ತು. ಈ ಬೇಡಿಕೆ ಬದಲಾಗಿ ರೈಲನ್ನು ಕೇರಳದ ಕಣ್ಣೂರುವರೆಗೆ ವಿಸ್ತರಿಸಲಾಗಿತ್ತು.
ಕೇಂದ್ರ ರೇಲ್ವೆ ಬಜೆಟ್‌ನಲ್ಲಿ ಘೋಷಿಸಿರುವ ಮುಂಬಯಿ- ಕಾರವಾರ ಸೂಪರ್ ಫಾಸ್ಟ್ ರೈಲು ಇನ್ನೂ ಆರಂಭವಾಗಿಲ್ಲ. ಕಾರವಾರದಿಂದ ಮಂಗಳೂರು ಕೇವಲ ೨೮೦ ಕಿಮೀ ದೂರದಲ್ಲಿದ್ದು, ರೈಲನ್ನು ಮಂಗಳೂರಿನವರೆಗೆ ವಿಸ್ತರಿಸಿದರೆ ಕರಾವಳಿಯ ಮೂರು ಜಿಲ್ಲೆ ಗಳಿಗೆ ಅನುಕೂಲವಾಗಲಿದೆ ಎಂಬುದು ರೈಲು ಹೋರಾಟಗಾರರ ಅಭಿಪ್ರಾಯ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-08-30 00:00:00
|
|
|