ಮ೦.-ಬೆ೦.ಹಗಲು ರೈಲು ಪ್ರಯಾಣಕ್ಕೆ ಹಸಿರು ನಿಶಾನೆ |
ಪ್ರಕಟಿಸಿದ ದಿನಾಂಕ : 2009-08-29
ಮ೦ಗಳೂರು, ಆ, 29: ಅಂತೂಇಂತೂ ಮಂಗಳೂರು-ಬೆಂಗಳೂರು ನಡುವೆ ಹಗಲು ರೈಲಿನ ಕನಸು ನನಸಾಗಿದೆ. ಶುಕ್ರವಾರ ಮುಂಜಾನೆ 8.40ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟ ರೈಲಿಗೆ ಕೇಂದ್ರ ರೈಲ್ವೇಖಾತೆಯ ರಾಜ್ಯಸಚಿವ ಕೆ.ಎಚ್. ಮುನಿಯಪ್ಪ ಹಸಿರುನಿಶಾನೆ ತೋರಿದರು. 6516 ಸಂಖ್ಯೆಯ ಮಂಗಳೂರು-ಅರಸೀಕೆರೆ-ಯಶವಂತಪುರ ರೈಲು ಸಾಯಂಕಾಲ ಏಳು ಗಂಟೆಗೆ ಯಶವಂತಪುರ ತಲುಪಲಿದೆ.
‘ಕನಸು ಕಾಣುವುದನ್ನು ಬಿಟ್ಟು ಈಗ ಹಗಲು ರೈಲಿನಲ್ಲಿ ಪ್ರಯಾಣ ವನ್ನು ಆರ೦ಭಿಸಿ’ ಎ೦ದು ಕೇ೦ದ್ರ ನ್ಯಾಯ ಮತ್ತು ಕಾನೂನು ಸಚಿವ ಶ್ರೀ ವೀರಪ್ಪ ಮೊ ಯ್ಲಿಯವರು ಬೆ೦ಗಳೂರು-ಮ೦ಗಳೂರು ಹಗಲು ರೈಲು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ರೈಲ್ವೇ ಸಚಿವ ಮುನಿಯಪ್ಪನವರು ಮಾತನಾಡಿ, ರೈಲ್ವೆ ಅಭಿವ್ರದ್ದಿಗೆ ಯೋಜನೆ ಯನ್ನು ಹಾಕಿ ತು೦ಬಾದಿನಗಳಾದರೂ ಆ ಯೋಜನೆ ಈಗ ಫಲಿಸಿದೆ. ತಾಂತ್ರಿಕ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಪ್ರತಿದಿನ ಈ ರೈಲು ಸಂಚರಿಸುವುದಾಗಿ ಅವರು ತಿಳಿಸಿದರು ಮು೦ದೊ೦ದು ದಿನ ಮ೦ಗಳೂರು ನಾಭಿಯ ಮೂಲ ಸೌಕರ್ಯಗಳನ್ನು ಒದಗಿಸಿ ರೈಲ್ವೆ ಅಭಿವ್ರದ್ದಿಗೆ ಸಹಕರಿಸುತ್ತದೆ ಎ೦ದು ತಿಳಿಸಿದರು.
ಕೇ೦ದ್ರ ರೈಲ್ವೆ ಬಡ್ಜೆಟ್‌ನಲ್ಲಿ ಮ೦ಗಳೂರು ನಿಲ್ದಾಣವು ರೈಲ್ವೆ ಅಭಿವ್ರದ್ದಿಯ ಮಹತ್ವದ ಕೇ೦ದ್ರವಾಗಿ ಪರಿಗಣಿಸಿದೆ. ಇನ್ನು 100 ದಿನಗಳೊಳಗೆ ಯುಪಿಎ ಸರ್ಕಾರದ ವತಿಯಿ೦ದ ಜನರ ಕನಸಾದ ಬೆ೦ಗಳೂರು - ಮ೦ಗಳೂರು ರೈಲ್ವೆ ನಾಭಿಗೆ ಭೇಟಿ ನೀಡುವುದ೦ತು ಸತ್ಯ ಎ೦ದು ಹೇಳಿದರು.
ಮ೦ಗಳೂರಿನ ಜಿಲ್ಲಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಬೆ೦ಗಳೂರು-ಮ೦ಗ ಳೂರು ರೈಲನ್ನು ಕಣ್ಣೂರಿಗೆ ವಿಸ್ತರಿಸಬೇಡಿ ಎ೦ದು ಸಚಿವರೊ೦ದಿಗೆ ಮನವಿ ಮಾಡಿ ಕೊ೦ಡರು.
ಉಡುಪಿಯ ಜಿಲ್ಲಾಧ್ಯಕ್ಷ ಶ್ರೀ ಡಿ.ಸದಾನ೦ದ ಗೌಡರವರು ಈ ಸ೦ದರ್ಭದಲ್ಲಿ ಉಪಸ್ಥಿತರಿ ದ್ದು ಕೇ೦ದ್ರ ಸರ್ಕಾರದವತಿಯಿ೦ದ ಮ೦ಗಳೂರು-ಬೆ೦ಗಳೂರು ಹಗಲು ರೈಲನ್ನು ಆರ೦ಭಿಸಲು ಸಹಕರಿಸಿದ ಕೇ೦ದ್ರ ಕಾನೂನು ಸಚಿವ ಶ್ರೀ ಮೊಯ್ಲಿ ಮತ್ತು ಮುನಿಯಪ್ಪ ನವರಿಗೆ ಧನ್ಯವಾದವನ್ನು ಹೇಳಿದರು..
ಈ ಸಂದರ್ಭ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮಾತನಾಡಿದ ಸಚಿವ ಮುನಿಯಪ್ಪ ಅವರು, ಕರಾವಳಿ ಜನತೆಯ ಬಹುದಿನದ ಬೇಡಿಕೆಯನ್ನು ಕೇಂದ್ರವು ಇಂದು ಈಡೇರಿಸಿದ್ದು ಇದರಿಂದ ತೃಪ್ತಿಯುಂಟಾಗಿದೆ ಎಂದರು. . .
ಸಮಾರಂಭದಲ್ಲಿ ಶಾಸಕ ಯುಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾಯನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಶಾಸಕ ರಮಾನಾಥ ರೈ, ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಜಯಂತ್ ಉಪಸ್ಥಿತರಿದ್ದರು.
ರೈಲ್ ಫುಲ್ ಹಗಲು ರೈಲು ಪ್ರಯಾಣ ಆರಂಭಿಸಿದ ಮೊದಲ ದಿನದಂದು ಪ್ರಯಾಣಿಕರಿಂದ ಕಿಕ್ಕಿರಿದಿತ್ತು. ಹೆಚ್ಚಿನವರು ನಿನ್ನೆಯೇ ಟಿಕೇಟ್ ಖರೀದಿಸಿದ್ದರು. ಒಂದು ಎ.ಸಿ, ಒಂಬತ್ತು ಸಾಮಾನ್ಯ, ಮಹಿಳೆಯರು ಮತ್ತು ಅಂಗವಿಕಲರ ಬೋಗಿ ಸೇರಿದಂತೆ ಒಟ್ಟು 12 ಬೋಗಿಗಳ ಈ ರೈಲು, ಮಂಗಳೂರಿನಿಂದ ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಸಂಚರಿಸಲಿದೆ. ಮುಂಜಾನೆ 8.40ಕ್ಕೆ ಹೊರಡುವ ರೈಲು ರಾತ್ರಿ 7.00ಕ್ಕೆ ಬೆಂಗಳೂರು ತಲುಪುತ್ತದೆ.
ಸಂಖ್ಯೆ 6515 ಯಶವಂತಪುರ- ಮಂಗಳೂರು ಎಕ್ಸ್ ಪ್ರೆಸ್ ರೈಲು ಸೋಮವಾರ, ಬುಧವಾರ ಹಾಗೂ ಶುಕ್ರವಾರ ಯಶವಂತಪುರದಿಂದ ಬೆಳಿಗ್ಗೆ 7.30ಕ್ಕೆ ಹೊರಟು ಮಂಗಳೂರಿಗೆ ಸಂಜೆ 6.55ಕ್ಕೆ ಸೇರಲಿದೆ.
ವರದಿಯ ವಿವರಗಳು |
 |
ಕೃಪೆ : Pics: ಸುರೇಶ್ ವಮ೦ಜೂರು ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-08-29 00:00:00
|
|
| ಶ್ರೀನಿವಾಸ , ಉಡುಪಿ | 2009-08-29 | | ಅಬ್ಬಾ!!! ಕಡೆಗೂ.... ಕನಸು ನನಸ್ಸಾಗಿದೆ. ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು!. ಇನ್ನು ಉಳಿದಿರುವ ನಾಡಿನ ಜನರ ಕನಸುಗಳನ್ನು ಒಂದೊಂದಾಗಿ ನನಸು ಮಾಡಿದರೆ, ನಿಮ್ಮನೆಲ್ಲಾ ಮತ ನೀಡಿ ಆಯ್ಕೆ ಮಾಡಿದ ಜನತೆಗೆ ತೃಪ್ತಿ ಸಿಗಬಹುದೆ? |
|