ಮನಾಮಾ: ದುಬಾರಿಯಾಗಲಿರುವ ಸಹಾಯವಾಣಿ : ಸಂಗ್ರಹವಾದ ಹಣ ಧರ್ಮಾರ್ಥಕಾರ್ಯಗಳಿಗೆ |
ಪ್ರಕಟಿಸಿದ ದಿನಾಂಕ : 2008-07-15
ಬಾಟೆಲ್ಕೋ ಸಹಾಯವಾಣಿಯ ಪ್ರತಿ ಕರೆ 150 ಫಿಲ್ಸ್ ಪ್ರತಿ ಕರೆಗೆ
ಮನಾಮಾ, ಜುಲೈ ೧೫: ಬಹರೇನ್ ನ ಪ್ರಮುಖ ಟೆಲಿಕಾಂ ಸಂಸ್ಥೆ ಬಾಟೆಲ್ಕೋ ಸಹಾಯವಾಣಿಗೆ ಮಾಡಲ್ಪಡುವ ಕರೆಗಳು ಪ್ರತಿ ಕರೆಗೆ 150 ಫಿಲ್ಸ್ ದುಬಾರಿಯಾಗಲಿವೆ. 181 ಹಾಗೂ 188 ಸಂಖ್ಯೆಗಳು ಈ ಹಿಂದಿನಂತೆಯೇ ಉಚಿತವಾಗಿದ್ದು ಪೂರ್ವಮುದ್ರಿತ ಸಂದೇಶಗಳನ್ನು ಒಳಗೊಂಡಿರುತ್ತವೆ.
ಡೈರೆಕ್ಟರಿ ವಿಚಾರಣೆ ಮೊದಲಾದ ಕರೆಗಳು ದುಬಾರಿಯಾಗಲಿದ್ದು ಈ ಮೂಲಕ ಸಂಗ್ರಹವಾದ ಧನವನ್ನು ಧರ್ಮಾರ್ಥಕಾರ್ಯಗಳಿಗೆ ವಿನಿಯೋಗಿಸುವುದಾಗಿ ಬಾಟೆಲ್ಕೋ ತಿಳಿಸಿದೆ. ಮೊಬೈಲ್ ಫೋನುಗಳ ಮೂಲಕ ಸಹಾಯವಾಣಿ ಸಂಗ್ರಹಿಸಿದ ಧನ ಈವರೆಗೆ 11,000 ಬಹರೇನಿ ದಿನಾರ್ ದಾಟಿದೆ.
ಆದರೆ ಬಾಟೆಲ್ಕೋ ಅಂತರ್ಜಾಲ ಸಂಪೂರ್ಣವಾಗಿ ಉಚಿತವಾಗಿವೆ ಹಾಗೂ ಇವುಗಳ ಸೀಡಿರೂಪ ಪ್ರತಿ ಗ್ರಾಹಕರಿಗೆ ನೀಡಲಾಗಿದ್ದು ಇವುಗಳ ಸೇವೆಯನ್ನು ಹಿಂದಿನಂತೆಯೇ ಪಡೆಯಬಹುದಾಗಿದೆ ಎಂದು ಬಾಟೆಲ್ಕೋ ತಿಳಿಸಿದೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್-ಡೇಲಿ-ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-15
|
|
|