ಬುಧವಾರ, 07-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್: ಯು.ಎ.ಇ.ಯಿಂದ ಆಗಮಿಸಿದ ಸಾಂಪ್ರಾದಾಯಿಕ ದೋಣಿಗಳಿಗೆ ಸಾಂಪ್ರಾದಾಯಿಕ ಸ್ವಾಗತ

ಈ ವರ್ಷದ ಮುತ್ತು ತೆಗೆಯುವ ಸ್ಪರ್ಧೆಗೆ ಯು.ಎ.ಇ. ನೀಡಿದ ಉಡುಗೊರೆ : ಹಬ್ಬದ ವಾತಾವರಣ

ಕುವೈಟ್, ಜುಲೈ 12: ಕುವೈಟಿನಲ್ಲಿ ಪ್ರತಿವರ್ಷ ನಡೆಯುವ ಸಮುದ್ರದಾಳದಿಂದ ಮುತ್ತು ಹೆಕ್ಕುವ ಸಾಂಪ್ರಾದಾಯಿಕ ವಾರ್ಷಿಕೋತ್ಸವದ ಅಂಗವಾಗಿ ಯು.ಎಇ. ಸರ್ಕಾರ ಕುವೈಟ್ ಸರ್ಕಾರಕ್ಕೆ ಒಟ್ಟು ಐದು ದೋಣಿಗಳನ್ನು ಉಡುಗೊರೆಯಾಗಿ ನೀಡಿದ್ದು ಕಳೆದ ಗುರುವಾರ ಸಲ್ಮಿಯಾ ಬಂದರಿಗೆ ಬಂದು ತಲುಪಿವೆ.  ಈ ದೋಣಿಗಳಿಗೆ ಕುವೈಟಿನ ಕೆ.ಎಸ್.ಎಸ್.ಸಿ.(The Kuwait Sea Sports Club (KSSC) ಸಂಘದ ಸದಸ್ಯರು  ಸಾಂಪ್ರಾದಾಯಿಕ ಗೀತೆ ಮತ್ತು ನೃತ್ಯಗಳ ಸಹಿತ ಭವ್ಯ ಸ್ವಾಗತ ನೀಡಿದ್ದಾರೆ.

ಈ ದೋಣಿಗಳನ್ನು ಸರಲ ಸಮಾರಂಭವೊಂದರಲ್ಲಿ  ಕುವೈಟ್ ಅಮೀರ್ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ಅವರು ಸ್ಪರ್ಧಾಳುಗಳಿಗೆ ಹಸ್ತಾಂತರಿಸಿದರು.  ಕೆ.ಎಸ್.ಎಸ್.ಸಿ ಅಧ್ಯಕ್ಷ ಫಹದ್ ಅಲ್ ಫಹದ್ ಹಾಗೂ ಪ್ರಧಾನ ಕಾರ್ಯದರ್ಶಿ ಜನರಲ್ ಅಹ್ಮದ್ ಅಲ್ ಕಬಾಂದಿಯವರು ಸ್ವೀಕರಿಸಿದರು.

ಸಂಘದ ಯುವ ಸದಸ್ಯರು ಈ ದೋಣಿಗಳನ್ನು ಸಾಂಪ್ರಾದಾಯಿಕ ಹಾಡು, ನೃತ್ಯಗಳ ಸಹಿತ ಬರಮಾಡಿಕೊಂಡರು.  ಈ ಸ್ಪರ್ಧೆಯಲ್ಲಿ ಕುವೈಟ್ ಅಮೀರ್ ರಿಗೆ ಅತೀವವಾದ ಆಸಕ್ತಿಯಿದ್ದು ಸಾಂಪ್ರಾದಾಯಿಕ ಕ್ರೀಡೆ ಹಾಗೂ ಆಚರಣೆಗಳನ್ನು ಮುಂದಿನ ಜನಾಂಗಕ್ಕೆ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿವರ್ಷ ಉತ್ಸವವನ್ನೇರ್ಪಡಿಸಿ ಯಶಸ್ವಿಗೊಳಿಸುವಲ್ಲಿ ತಮ್ಮ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಈ ದೋಣಿಗಳು ಫೈಬರ್ ಗ್ಲಾಸ್ ನಿಂದ ರಚಿಸಲ್ಪಟ್ಟಿದ್ದು ಮೋಟಾರು ಇಂಜಿನ್ನುಗಳ ನೆರವಿನಿಂದ ಚಲಿಸುತ್ತವೆ.  ಸಾಂಪ್ರಾದಾಯಿಕ ದೋಣಿಗಳಿಗೆ ಸಮಾನವಾಗಿ ಇವನ್ನು ರಚಿಸಲಾಗಿದೆ. ಇವುಗಳ ಉದ್ದ 55 ಅಡಿ ಇದ್ದು ಹೆಚ್ಚಿನ ಕ್ಷಮತೆ ಹೊಂದಿವೆ ಎಂದು ಈ ಉತ್ಸವದ ನಿರ್ವಹಣಾ ಅಧಿಕಾರಿಯಾಗಿರುವ ಕ್ಯಾಪ್ಟನ್ ಯೂಸುಫ್ ನಜಾರ್ ತಿಳಿಸಿದ್ದಾರೆ.  ಈ ವರ್ಷದ ಮುತ್ತು ತೆಗೆಯುವ ಉತ್ಸವ ಜುಲೈ 23 ರಿಂದ 31ರ ವರೆಗೆ ಜರುಗಲಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕುವೈಟ್ ಟೈಮ್ಸ್
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-12


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri