ಚಿಕಾಗೋ: ಸ್ವಾಮಿ ಸುಖಬೋಧಾನಂದನ ಆಗಮನ : ಎರೆಡು ದಿನಗಳ ಪ್ರವಚನ |
ಪ್ರಕಟಿಸಿದ ದಿನಾಂಕ : 2008-07-11
ಉಚಿತ ಕಾರ್ಯಕ್ರಮ : ಸರ್ವರಿಗೂ ಸ್ವಾಗತ
ಚಿಕಾಗೋ, ಜುಲೈ 11: ಇಂದಿನ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನವನ್ನು ಸುಖಕರವನ್ನಾಗಿಸುವ ನಿಟ್ಟಿನಲ್ಲಿ ಸ್ವಾಮಿ ಸುಖಬೋಧಾನಂದರ ಪ್ರವಚನಗಳು ಅತ್ಯುತ್ತಮ ದಾರಿದೀಪವಾಗಿವೆ. ಅವರ 'ಮನಸ್ಸೇ ರಿಲಾಕ್ಸ್ ಪ್ಲೀಸ್', 'ವರ್ಡ್ ಲೆಸ್ ವಿಸ್ಡಂ' ಹಾಗೂ ಸೆಲೆಬ್ರೇಟಿಂಗ್ ಸಕ್ಸಸ್ ಅಂಡ್ ಫೈಲ್ಯೂರ್ ಮೊದಲಾದವು ಹಲವು ಭಾಷೆಗಳಿಗೆ ಭಾಷಾಂತರಗೊಂಡು ಹಲವರ ಜೀವನದಲ್ಲಿ ಬೆಳಕು ಮೂಡಿಸಿವೆ. ಭಾರತದ ಅತ್ಯಂತ ಪ್ರಭಾವೀ ಧಾರ್ಮಿಕ ವ್ಯಕ್ತಿಗಳಲ್ಲಿ ಪ್ರಥಮ ಐವರಲ್ಲಿ ಇವರನ್ನು ಟಮ್ಸ್ ಮ್ಯಾಗಜಿನ್ ಗುರುತಿಸಿದೆ.
ಅತ್ಯಂತ ಸ್ಪಷ್ಟ ವಾಗ್ಮಿಯೆಂದು ಟೈಮ್ಸ್ ಆಫ್ ಇಂಡಿಯಾ ಬಿರುದನ್ನಿತ್ತಿದೆ. ಸ್ವಾಮೀಜಿಯವರು ನಿಗದಿತವಾಗಿ ವಿಶ್ವದೆಲ್ಲೆಡೆ ತಮ್ಮ ಪ್ರವಚನಗಳನ್ನು ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಸ್ವಿಟ್ಜರ್ ಲ್ಯಾಂಡ್ ನ ದಾವೋಸ್ ನಗರದಲ್ಲಿ ಜರುಗಿದ ವಿಶ್ವ ವಾಣಿಜ್ಯ ಸಂಕಿರಣದಲ್ಲಿಯೂ ಆಹ್ವಾನಿತರಾಗಿದ್ದಾರೆ. ಇತ್ತೀಚೆಗೆ ಜೀ-ಟೀವಿ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿಯಿಂದ ಇವರನ್ನು ಸನ್ಮಾನಿಸಿದೆ.
ಆರೋರಾದಲ್ಲಿರುವ ಬಾಲಾಜಿ ದೇವಸ್ಥಾನ ಆವರಣದಲ್ಲಿ ಭಗವದ್ಗೀತೆಯ ಮೂಲಕ ವ್ಯಕ್ತಿತ್ವ ವಿಕಸನ ಎಂಬ ವಿಚಾರದ ಮೇಲೆ ಸ್ವಾಮೀಜಿಯವರು ಪ್ರವಚನ ನೀಡಲಿದ್ದು ಅದರ ವಿವರಗಳು ಈ ಕೆಳಗಿನಂತಿವೆ:
1. Personal Effectiveness through Bhagvad Gita - Swami Sukhabodhananda speaks on the relevance of Bhagvad Gita in resolving everyday conflicts in modern life. Swamiji dwells on Bhagvad Gita and explains how to resolve conflicts in harmonious and creative ways and to emerge as an inner and outer winner.
Fri Aug 29th 7:45 to 9:30pm Sat Aug 30th 7:00 to 9:00pm Venue: Balaji Temple Auditorium, 1145 W Sullivan Road, Aurora, IL 60506.
2. Enhancing quality of Life - Sun - AUG 31st 9.30am to 12.30pm
Workshop on Stress Management, Interpersonal Skills, Wise Parenting and Goal Setting.
Venue: Barn Recreation Center, 421 West margin, Naperville, IL60540. Donation $20 (until 30th August) $25 at the gate https://www.sulekha.com/ticketsV3/buytickets.aspx?cid=534862
Call for more info/tickets: 408-425-2851, 630-605-2125
Email: toshakila@gmail.com, bathinarajani@yahoo.com, pappu_satya@yahoo.com
www.swamisukhabodhananda.org
ಕಾರ್ಯಕ್ರಮವು ಉಚಿತವಾಗಿದ್ದು ಸರ್ವರಿಗೂ ಸ್ವಾಗತ ಕೋರಲಾಗಿದೆ.
ವರದಿಯ ವಿವರಗಳು |
 |
ಕೃಪೆ : ಡಾ. ಆಸ್ಟಿನ್ ಪ್ರಭು, ಚಿಕಾಗೋ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-11
|
|
|