ಮಸ್ಕತ್: ಸಂಚಾರಿ ಉದ್ಯೋಗಾಲಯಕ್ಕೆ ಡಾ. ಜುಮಾ ಅಸ್ತು |
ಪ್ರಕಟಿಸಿದ ದಿನಾಂಕ : 2008-07-10
ಸ್ಥಳೀಯರಿಗೆ ಉದ್ಯೋಗ ಮತ್ತು ತರಬೇತಿಯ ನಿಟ್ಟಿನಲ್ಲಿ ಹೊಸ ಕ್ರಮ
ಮಸ್ಕತ್, ಜುಲೈ 10: ಮಾನವ ಸಂಪನ್ಮೂಲ ಇಲಾಖೆ ಒಮಾನಿ ನಾಗರಿಕರಿಗೆ ತರಬೇತಿ ಹಾಗೂ ಉದ್ಯೋಗಾವಕಾಶಗಳ ಮಾಹಿತಿ ನೀಡುವ ಉದ್ದೇಶದಿಂದ ಸಂಚಾರಿ ಕಾರ್ಯಾಲಯವೊಂದನ್ನು ನಿರ್ಮಿಸಲು ಉದ್ದೇಶಿಸಿದ್ದು ಈ ಪ್ರಯುಕ್ತ ಒಮಾನ್ ಮೊಬೈಲ್ ಸಂಸ್ಥೆಯೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ನಲವತ್ತು ಸಾವಿರ ಒಮಾನಿ ರಿಯಾಲ್ ಖರ್ಚಿನ ಈ ಸಂಚಾರಿ ಕಾರ್ಯಾಲಯವನ್ನು ಸ್ಥಾಪಿಸಲು ಉದ್ಯೋಗ ಸಚಿವರಾದ ಡಾ. ಜುಮಾ ಬಿನ್ ಆಲಿ ಬಿನ್ ಜುಮಾರವರು ತಮ್ಮ ಅನುಮೋದನೆ ನೀಡಿದ್ದಾರೆ.
ಓಮಾನ್ ನಲ್ಲಿರುವ ಖಾಸಗಿ ಕ್ಷೇತ್ರದಲ್ಲಿ ನಾಗರಿಕರನ್ನು ಹೆಚ್ಚು ಉದ್ಯೋಗಗಳಲ್ಲಿ ಸೇರಿಸುವ ನಿಟ್ಟಿನಲ್ಲಿ ಈ ಅಭಿಯಾನ ಪ್ರಾರಂಭವಾಗಿದೆ. ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳು ಹಾಗೂ ವಿಲಾಯತ್ ಕ್ಷೇತ್ರದಲ್ಲಿರುವ ಅವಕಾಶಗಳನ್ನೂ ಈ ಕಾರ್ಯಾಲಯ ಪ್ರಸಾರ ಮಾಡಲಿದೆ. ಒಮಾನ್ ಸರಕಾರದ ಸನಾದ್ ಕಾರ್ಯಕ್ರಮ ಕೂಡಾ ಈ ಕಾರ್ಯಾಲಯದಲ್ಲಿ ಅಡಕವಾಗಿದೆ.
ವರದಿಯ ವಿವರಗಳು |
 |
ಕೃಪೆ : ಒಮಾನ್ ಟ್ರಿಬ್ಯೂನಲ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-10
|
|
|