ಸುನಿತಾ ವಿಲಿಯಮ್ಸ್‌ಗೆ ಅಮೆರಿಕದ ಹೂಸ್ಟನ್ನಲ್ಲಿ ಪದ್ಮಭೂಷಣ ಪ್ರದಾನ |
ಪ್ರಕಟಿಸಿದ ದಿನಾಂಕ : 2008-07-06
ಪಿಟಿಐ, ಹೂಸ್ಟನ್, ಜು.೫. ಭಾರತೀಯ ಮೂಲದ ಅಮೆರಿಕದ ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ ಪ್ರತಿಷ್ಠಿತ ’ಪದ್ಮಭೂಷಣ’ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.
ಹೂಸ್ಟನ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ದೂತಾವಾಸದ ಮುಖ್ಯಸ್ಥ ಎಂ.ಎಂ. ಗವಾಯಿ ಅವರು ಸುನಿತಾರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಮೆರಿಕದಲ್ಲಿನ ಭಾರತೀಯ ಸಮುದಾಯ ಪಾಲ್ಗೊಂಡಿತ್ತು.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪದ್ಮ ಪ್ರಶಸ್ತಿ ಸಮಾರಂಭದಲ್ಲಿ ಸುನಿತಾರಿಗೆ ಕಾರ್ಯ ಒತ್ತಡದಿಂದ ಪಾಲ್ಗೊಳ್ಳಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಅಮೆರಿಕದಲ್ಲೇ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು.
ನೇರಳೆ ಬಣ್ಣದ ಕುರ್ತಾ, ಸಲ್ವಾರ್ ಧರಿಸಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸುನಿತಾ ಮಾತನಾಡಿ, ’ಗಾಂಧಿಯಂಥ ಮಹಾಮಹಿಮರು ಬಾಹ್ಯಾಕಾಶಕ್ಕೆ ತೆರಳದಿದ್ದರೂ ಈ ಗಡಿರಹಿತ ಪ್ರಪಂಚ, ವಿಶ್ವಮಾನವತ್ವ ಪ್ರತಿಪಾದಿಸಿದ್ದರು’ ಎಂದರು.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-07-06
|
|
|