ಕುವೈಟ್: ಮಂಗಳೂರಿಗೆ ನೇರ ವಿಮಾನ ಸೌಲಭ್ಯ ಶಾರ್ಜಾ ಮುಖಾಂತರ |
ಪ್ರಕಟಿಸಿದ ದಿನಾಂಕ : 2008-07-06
ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರಕಟಣೆ: ಹೆಚ್ಚಿದ ವ್ಯಾಪ್ತಿ
ಮಂಗಳೂರು, ಜುಲೈ 5: ಕುವೈಟಿನಿಂದ ಮಸ್ಕತ್ ಮಾರ್ಗವಾಗಿ ಮಂಗಳೂರಿಗೆ ನಿಗದಿತವಾಗಿದ್ದ ವಿಮಾನಯಾನವನ್ನು ಶಾರ್ಜಾ ಮೂಲಕ ಮುಂದುವರೆಯುವಂತೆ ಮರು ನಿಗದಿಗೊಳಿಸಲಾಗಿದೆ.
ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿ ಈಗಲೂ ಜಾರಿಯಲ್ಲಿದ್ದು ಕೇವಲ ಮಧ್ಯದ ನಿಲುಗಡೆ ಮಾತ್ರ ಬದಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಗಲ್ಫ್ ನಗರಗಳಾದ ದುಬೈ, ಶಾರ್ಜಾ, ಅಬುಧಾಬಿ, ಮಸ್ಕತ್, ದೋಹಾ, ಬಹರೇನ್ ಹಾಗೂ ಕುವೈಟ್ ಗಳಿಂದ ಮಂಗಳೂರಿಗೆ ನೇರ ವಿಮಾನ ಸೌಲಭ್ಯ ಸಿಕ್ಕಂತಾಗಿದೆ.
ಮಸ್ಕತ್ ನಲ್ಲಿ ಏರ್ ಇಂಡಿಯಾ ಸಂಸ್ಥೆಗೆ ಆಸನಗಳನ್ನು ನೀಡುವ ಬಗ್ಗೆ ಕೆಲವು ಸಮಸ್ಯೆಗಳು ತೊಡಕಾಗಿದ್ದು ಪರಿಣಾಮವಾಗಿ ಶಾರ್ಜಾ ಮೂಲಕ ಮರುನಿಗದಿಸಬೇಕಾಯ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಧ್ಯ ಆನ್ ಲೈನ್ ಬುಕಿಂಗ್ ವ್ಯವಸ್ಥೆ ನಿರ್ವಹಣೆಯಲ್ಲಿದ್ದು ಶೀಘ್ರದಲ್ಲಿಯೇ ಮರುಕಾರ್ಯಾಚರಣೆ ಆರಂಭಿಸಲಿದೆ.
ಚಿತ್ರದಲ್ಲಿ ಪ್ರಥಮ ಕುವೈಟ್ - ಮಂಗಳೂರು ಯಾನದ ಟಿಕೆಟ್ ಅನ್ನು ಯು.ಎ.ಕೆ.ಕೆ. ಸಂಸ್ಥೆಯ ಅಧಿಕಾರಿ ಹಾಗೂ ಕುವೈಟ್ ಕೊಂಕಣ್ ಅಧ್ಯಕ್ಷರಾದ ಪಾಸ್ಕಲ್ ಪಿಂಟೋರವರಿಗೆ ಅರ್ಪಿಸಲಾಯಿತು. ಚಿತ್ರದಲ್ಲಿ ಸೇಲ್ಸ್ ಮ್ಯಾನೇಜರ್ ತಸ್ನೀಮ್ ಶಬ್ಬೀರ್ ದಲಾಲ್, ರಿಸರ್ವೇಶನ್ ಮ್ಯಾನೇಜರ್ ಶರಾಫ್ ಅಯ್ದೀದ್ ಮೊದಲಾದವರನ್ನು ಕಾಣಬಹುದು.
ವರದಿಯ ವಿವರಗಳು |
 |
ಕೃಪೆ : ದೈಜಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-07-06
|
|
|