ರಿಯಾಧ್- ಮಂಗಳೂರು ನೇರ ವಿಮಾನ ಅಭಿಯಾನ |
ಪ್ರಕಟಿಸಿದ ದಿನಾಂಕ : 2008-07-02
ರಿಯಾಧ್- ಮಂಗಳೂರು ನೇರ ವಿಮಾನ ಅಭಿಯಾನ
ರಿಯಾಧ್: ರಿಯಾಧ್ ಮಂಗಳೂರು ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಲು ಕರಾವಳಿ ವೆಲ್ಫೇರ್ ಸಮಿತಿಯನ್ನು ರೂಪಿಸಲಾಯಿತು. ಮಂಗಳೂರಿನ ಎಲ್ಲಾ ವರ್ಗದ ಜನರನ್ನು ಜತೆಗೂಡಿಸಬೇಕು ಎಂಬ ಉದ್ದೇಶದೊಂದಿಗೆ ಈ ಸಮಿತಿಯನ್ನು ರೂಪಿಸಲಾಗಿದೆ.
ಜುಲೈ 4 ರಂದು ಅಭಿಯಾನ ಅಧಿಕೃತವಾಗಿ ಆರಂಭವಾಗಲಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಮಿತಿಯ ಅಧ್ಯಕ್ಷರಾಗಿ ವಿಜಯ್ ರೈ ಅವರನ್ನು ಆಯ್ಕೆ ಮಾಡಲಾಗಿದೆ.
ರಿಯಾಧ್‌ನಲ್ಲಿರುವ ಹಲವಾರು ಕಂಪನಿಗಳಲ್ಲಿ ದುಡಿಯುತ್ತಿದ್ದು ಮಂಗಳೂರಿಗೆ ನೇರ ಸಂಪರ್ಕ ಕಲ್ಪಿಸಿದರೆ ಇಲ್ಲಿನ ಕಾರ್ಮಿಕರಿಗೆ ಭಾರಿ ಪ್ರಮಾಣದಲ್ಲಿ ಪ್ರಯೋಜನ ಕಾರಿಯಾಗಲಿದೆ. ರಿಯಾಧ್‌ನಲ್ಲಿರುವ ಹೆಚ್ಚಿನ ಕಂಪನಿಗಳು ಮುಂಬೈಗೆ ಮಾತ್ರ ವಿಮಾನ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿವೆ. ಕರ್ನಾಟಕದ ಶಾಸಕರು, ಸಂಸದರು, ಕೇಂದ್ರ ಸಚಿವರಿಗೆ ಈ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲು ಸಮಿತಿ ನಿರ್ಧರಿಸಿದೆ.
ಈ ಅಭಿಯಾನದ ಆರಂಭಿಕ ಹಂತವಾಗಿ ಹಸ್ತಾಕ್ಷರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಿಯಾಧ್‌ನಲ್ಲಿರುವ ಮಂಗಳೂರಿಗರು ಒಗ್ಗಟ್ಟಾಗಿ ಕಾರ್ಯವೆಸಗಿದರೆ ಉದ್ದೇಶಿತ ಕಾರ್ಯದಲ್ಲಿ ಸಫಲತೆ ಗಳಿಸುವುದು ಸುಲಭ ಎಂದು ಸಮಿತಿ ಅಧ್ಯಕ್ಷ ವಿಜಯ್ ರೈ ತಿಳಿಸಿದ್ದಾರೆ.
ಮಂಗಳೂರಿಗೆ ನೇರ ವಿಮಾನ ಯಾನ ಆರಂಭವಾದರೆ ಇದರಿಂದ ಉತ್ತರ ಕೇರಳದ ಜಿಲ್ಲೆಗಳಾದ ಕಾಂಞಂಗಾಡ್, ಕಣ್ಣೂರಿನವರಿಗೂ ಪ್ರಯೋಜನವಾಗಲಿದೆ ಎಂದು ಪ್ರಧಾನ ಕಾರ್ಯದರ್ಶಿ ರಾಯ್‌ಸ್ಟನ್ ಪ್ರಭು ಅಭಿಪ್ರಾಯಪಟ್ಟರು.
ಎರಡು ತಿಂಗಳ ಹಿಂದೆಯೇ ಜಾಮಿಯತ್-ಉಲ್-ಫಲಾಹ್ ಸಂಘಟನೆ ಹಸ್ತಾಕ್ಷರ ಅಭಿಯಾನವನ್ನು ಆರಂಭಿಸಿ ವಿದೇಶಾಂಗ ವ್ಯವಹಾರ ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದೆ.
ಇಫ್ತಿಕಾರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಕುಮಾರ್ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-07-02
|
|
| salamybc, udupi moolur | 2008-12-11 | | gulf kannadigara kanasina koosu |
| FAZLU REHMAN, GANGULLI | 2008-07-05 | | PLEASE PUSH PRESSURE TO OUR LOCAL POLITICIAN IN INDIA |
|